ಸವದತ್ತಿ : ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರ 60ನೇ ಹುಟ್ಟುಹಬ್ಬದ ಅಂಗವಾಗಿ, ಕರ್ನಾಟಕ ರಕ್ಷಣಾ ವೇದಿಕೆಯ ಸವದತ್ತಿ ತಾಲೂಕು ಘಟಕದ ವತಿಯಿಂದ ಸ್ಥಳೀಯ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಮಾನವೀಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಂಗವಾಗಿ ಆಸ್ಪತ್ರೆಯ ಬಾಣಂತಿಯರಿಗೆ ಮತ್ತು ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ಹಾಗೂ ಬಿಸ್ಕೆಟ್ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಮುಖಂಡರು, ಲಕ್ಷಾಂತರ ಕಾರ್ಯಕರ್ತರಿಗೆ ಕನ್ನಡದ ದೀಕ್ಷೆಯನ್ನು ನೀಡಿ, ಕನ್ನಡ ಪರ ಹೋರಾಟಗಳಿಗೆ ಬಲ ತುಂಬಿದ ಅಣ್ಣ ಟಿ.ಎ. ನಾರಾಯಣಗೌಡ ಅವರು ನೂರು ಕಾಲ ಆರೋಗ್ಯವಂತರಾಗಿ ಬಾಳಿ, ನಾಡು-ನುಡಿಯ ಸೇವೆ ಮಾಡುವ ಶಕ್ತಿಯನ್ನು ಆ ತಾಯಿ ಯಲ್ಲಮ್ಮದೇವಿ ನೀಡಲಿ, ಎಂದು ಹಾರೈಸಿದರು. ರಾಜ್ಯದ ಉದ್ದಗಲಕ್ಕೂ ಕನ್ನಡದ ಕಂಪು ಪಸರಿಸಿರುವ ನಾರಾಯಣಗೌಡರಿಗೆ ಭಗವಂತ ಆಯುರಾರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಈ ಕಾರ್ಯಕ್ರಮದಲ್ಲಿ ಕರವೇ ಬೆಳಗಾವಿ ಜಿಲ್ಲಾ ಸಂಚಾಲಕರಾದ ಉದಯಕುಮಾರ್ ಚಿಕ್ಕಣ್ಣವರ, ಗಂಗಾಧರ ಇನಾಮತಿ, ಬಸವರಾಜ ಕಾಂತಿಮಠ, ಇಮಾಮಸಾಬ ಕಳ್ಳಿಮನಿ, ವಿಠ್ಠಲ ತಳವಾರ, ಸುಭಾನ ನದಾಫ, ಚಂದ್ರು ಪಿರಗನ್ನವರ, ಮಹಾಂತೇಶ ಬಾನಿ ಸೇರಿದಂತೆ ಕರವೇ ಪದಾಧಿಕಾರಿಗಳು ಇದ್ದರು.
ಸವದತ್ತಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಮಲ್ಲನಗೌಡ, ಡಾ. ಬಸವರಾಜ ಕುಡಸೋಮಣ್ಣರ್, ಎಂ.ಆರ್. ಹಲಗೆಕರ್, ಬಿ.ಆರ್. ಮೈಲಣ್ಣವರ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಈ ಉದಾತ್ತ ಕಾರ್ಯದಲ್ಲಿ ಸಹಕರಿಸಿದರು.