ಸವದತ್ತಿ : ಶಾಸಕ ವಿಶ್ವಾಸ ವೈದ್ಯ ಅವರು ಇತ್ತೀಚೆಗೆ ಪವಿತ್ರ ಯಾತ್ರಾಸ್ಥಳ ತಿರುಮಲಕ್ಕೆ ಭೇಟಿ ನೀಡಿ, ಕಲಿಯುಗದ ಪ್ರತ್ಯಕ್ಷ ದೈವ ಶ್ರೀ ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ತಿರುಪತಿ ತಿಮ್ಮಪ್ಪನ ಭವ್ಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ಅವರು, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.
ಬಳಿಕ ಮಾತನಾಡಿದ ಅವರು ಶ್ರೀ ವೆಂಕಟೇಶ್ವರ ಮಹಾಸ್ವಾಮಿಯ ಚರಣಾರವಿಂದಗಳಲ್ಲಿ ನನ್ನ ಸವದತ್ತಿ ಕ್ಷೇತ್ರದ ಸಮಸ್ತ ಜನತೆಗೆ ಆಯುಷ್ಯ, ಆರೋಗ್ಯ, ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲೆಂದು ಭಕ್ತಿಯಿಂದ ಪ್ರಾರ್ಥಿಸಿದ್ದೇನೆ. ಜನರ ಆಶೀರ್ವಾದದಿಂದ ದೊರೆತ ಈ ಅವಕಾಶದಲ್ಲಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಲು ಭಗವಂತನ ಕೃಪೆ ಸದಾ ಇರಲಿ ಎಂದು ಕೋರಿದ್ದೇನೆ ಎಂದು ತಿಳಿಸಿದರು.