ವಿಶೇಷ ಚೇತನರಿಗೆ ವಿಶೇಷ ಜಾಬ್ ಕಾರ್ಡ ವಿತರಣೆ
ಸವದತ್ತಿ ತಾಲೂಕಿನ ಸುತಗಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗುರುವಾರ ವಿಶೇಷ ಚೇತನರಿಗೆ ವಿಶೇಷ ಜಾಬ್ ಕಾರ್ಡ್ ವಿತರಣೆ ಅಭಿಯಾನಕ್ಕೆ ಮಾನ್ಯ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಆನಂದ ಬಡಕುಂದ್ರಿ ರವರು ವಿಶೇಷಚೇತನರ ಮನೆಗೆ ಭೇಟಿ ನೀಡಿ ವಿಶೇಷ ಜಾಬ್ ಕಾರ್ಡ್ ವಿತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಬಡಕುಂದ್ರಿ ಅವರು ಮಾತನಾಡಿ ಎಲ್ಲ ಅರ್ಹ ವಿಶೇಷ ಚೇತನರು ವಿಶೇಷ ಜಾಬ್ ಕಾರ್ಡ್ ಪಡೆದುಕೊಂಡು ಮನರೇಗಾ ಯೋಜನೆಯಡಿ 100 ದಿನಗಳ ಕಾಲ ಉದ್ಯೋಗ ಪಡೆದುಕೊಳ್ಳಬೇಕು. ಇದರಿಂದಾಗಿ ವಿಶೇಷಚೇತನರ ಕುಟುಂಬ ಆರ್ಥಿಕವಾಗಿ ಸದೃಢವಾಗಲು ಅನುಕೂಲವಾಗಲಿದೆ.
2025-26ನೇ ಸಾಲಿಗೆ ಪ್ರತಿ ಮಾನವ ದಿನಕ್ಕೆ 370 ರೂ. ನೀಡಲಾಗುತ್ತಿದೆ ವಿಶೇಷ ಚೇತನರಿಗೆ ಕೆಲಸದಲ್ಲಿ ರಿಯಾಯಿತಿ ಇದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ತಾಪಂ ಸಹಾಯಕ ನಿರ್ದೇಶಕ (ಗ್ರಾ.ಉ) ರಾಮಪ್ಪ ರಕ್ಕಸಗಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಹಾದೇವ ಗಡೇಕಾರ, ತಾಪಂ ಐಇಸಿ ಸಂಯೋಜಕ ಮಲೀಕಜಾನ ಮೋಮಿನ, ತಾಪಂ ತಾಂತ್ರಿಕ ಸಂಯೋಜಕ ಮಹಾದೇವ ಕಾಮನ್ನವರ, ತಾಂತ್ರಿಕ ಸಹಾಯಕಿ ವಿಜಯಶ್ರೀ ನಾಗರಾಳ, ಗ್ರಾಮ ಕಾಯಕ ಮಿತ್ರ, ಬಿಎಫ್ ಟಿ, ವಿಆರ್ ಡಬ್ಲ್ಯೂ, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಇನ್ನಿತರರು ಉಪಸ್ಥಿತಿದ್ದರು.
