*ಬಸವಣ್ಣನವರು ಒಬ್ಬ ಮಹಾನ್ ಕವಿ ಸಮಾಜ ಸುಧಾರಕ*

ಸವದತ್ತಿ : ಬಸವಣ್ಣನವರು ಒಬ್ಬ ಮಹಾನ್ ಕವಿ ಸಮಾಜ ಸುಧಾರಕ ಮತ್ತು ತತ್ವಜ್ಞಾನಿಯಾಗಿ ಹೊರಹೊಮ್ಮಿದರು, ಬಸವಣ್ಣನವರ ದೇಶದ ಅತ್ಯುತ್ತಮ ಸಮಾಜ ಸೇವಕರಲ್ಲಿ ಒಬ್ಬರು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಇಲ್ಲಿನ ಕರೀಕಟ್ಟಿ ಕ್ರಾಸ್ ನಲ್ಲಿ ಬಸವ ಜಯಂತಿ ನಿಮಿತ್ತ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಮಾತನಾಡಿದ ಅವರು, ಬಸವಣ್ಣನವರು ವಚನಗಳ ಮೂಲಕ ಅವರು ಸಮಾಜಿಕ ಜಾಗೃತಿಯನ್ನು ಹರಡಲು ಪ್ರಾರಂಭಿಸಿದರು, ಅವರ ಮುಖ್ಯ ಬೋಧನೆಗಳಲ್ಲಿ ಲಿಂಗ ಸಮಾನತೆ, ಸಮಾಜಿಕ ಸುಧಾರಣೆಗಳು ಸಮಾಜಿಕ ತಾರತಮ್ಯದ ನಿರ್ಮೂಲನೆ ಮೂಢನಂಬಿಕೆ ಹಾಗೂ ಅನಗತ್ಯ ಆಚರಣೆಗಳು ಸೇರಿವೆ,12 ನೇ ಶತಮಾನದಲ್ಲಿ ಈ ಸಮಾಜಿಕ ವಿಷಯಗಳು ಕುರಿತು ಬಸವೇಶ್ವರರ ಹೊಸ ಬೋಧನೆಗಳು ಅವರನ್ನು ಹಲವಾರು ಜನರಲ್ಲಿ ಸಾಕಷ್ಟು ಜನಪ್ರಿಯಗೊಳಿಸಿದವು ಎಂದರು.
ಬಿಜೆಪಿ ಮುಖಂಡ ವಿರುಪಾಕ್ಷ ಮಾಮನಿ ಮಾತನಾಡಿ, ಕನ್ನಡ ನೆಲದ ಮೇಲೆ ಸಮಾಜ ಕಲ್ಯಾಣ ಚಳುವಳಿ ಆರಂಭಿಸಿ, ಅನುಭವ ಮಂಟಪದ ಮೂಲಕ ಸರ್ವ ಜನಾಂಗದ ಜನರ ಅಂತರಾತ್ಮದ ಕಣ್ಣು ತೆರೆಸಿದ ವಿಶ್ವಗುರು ಬಸವಣ್ಣನವರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಶೀಘ್ರವೇ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೊಡಬೇಕಾದ ಅವಶ್ಯಕತೆ ಇದೆ ಎಂದರು.
ಬಸವೇಶ್ವರ ಭಾವಚಿತ್ರದೊಂದಿಗೆ ನಡೆದ ಜೋಡೆತ್ತಿನ ಮೆರವಣಿಗೆಗೆ ಶಾಸಕ ವಿಶ್ವಾಸ್ ವೈದ್ಯ ಹಾಗೂ ಮುಖಂಡ ವಿರುಪಾಕ್ಷ ಮಾಮನಿ ಚಾಲನೆ ನೀಡಿದರು. ಬಸವೇಶ್ವರ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಪಟ್ಟದಕಲ್ಲ ಓಣಿ, ಪೋಸ್ಟ್ ಆಫೀಸ್, ಗಾಂಧಿ ಚೌಕ್, ಆನಿ ಅಗಸಿ, ಕಡಕೋಳ ಬ್ಯಾಂಕ್ ಮಾರ್ಗವಾಗಿ ಎಪಿಎಂಸಿ ವೃತ್ತ ತಲುಪಿತು.
ಈ ವೇಳೆ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನವರ, ತಾ.ಪಂ. ಇಒ ಆನಂದ ಬಡಕುಂದ್ರಿ, ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿನಮಠ,ಅಶೋಕ ಮುರಗೋಡ, ಅನಿಲ ಮರಲಿಂನವರ, ಶಿವರಾಜ ಪಾಟೀಲ,ಬಸವರಾಜ ಕಾರದಗಿ, ಅಲ್ಲಮ ಪ್ರಭುನವರ, ರಾಜಶೇಖರ ನಿಡವಣಿ, ಬಸವರಾಜ ಪುಟ್ಟಿ, ಪಿಐ ಧರ್ಮಾಕರ ಧರ್ಮರಟ್ಟಿ, ಮಂಜು ಪಾಚಾಂಗಿ,ಬಸು ಅರಮನಿ, ಜಗದೀಶ್ ಶಿಂತ್ರಿ, ಇದ್ದರು.
