*ವೈ. ಬಿ. ಕಡಕೋಳ ಸಂಪಾದಕತ್ವದ ಅನುಭವಾಮೃತ ನುಡಿಗಳು ಕೃತಿ ಲೋಕಾರ್ಪಣೆ ಹಾಗೂ ಸ್ಟಾರ್ ಆಪ್ ಕರ್ನಾಟಕ ಕಾರ್ಯ ಕ್ರಮ*
ಸವದತ್ತಿ: “ಕಡಕೋಳ ಸರ್ ಹಾಗೂ ಲಕ್ಕಮ್ಮನವರ ಸರ್ ನನ್ನ ಆಪ್ತ ಸ್ನೇಹಿತರು.ನಮ್ಮ ಸ್ನೇಹಿತರು ಒಳ್ಳೆಯ ಕಾರ್ಯ ಮಾಡುತ್ತಿರುವರು ನನಗೆ ಇದು ಹೆಮ್ಮೆ.ನಾವೆಲ್ಲರೂ ಮಾಡುತ್ತಿರುವುದು ನಮ್ಮ ಸಮಾಜದಲ್ಲಿ ಉತ್ತಮ ಗುಣಮಟ್ಟದ ಕೆಲಸ.ನಮಗೆ ನಮ್ಮ ಕಾರ್ಯ ಹೆಮ್ಮೆ ತಂದಿದೆ.ಇಂದು ಮುಂಡರಗಿ ಬೀಳಗಿ ಗ್ರಾಮದ ನನ್ನ ವೃತ್ತಿ ಬಾಂಧವರು ಇಲ್ಲಿ ಬಂದದ್ದು ನನಗೆ ಸಂತಸ ತಂದಿದೆ.ಅಷ್ಟಮದಗಳೆಂಬ ಪಾಶವನ್ನು ಹರಿದು ಆಧ್ಯಾತ್ಮಿಕ ಆದಿಭೌತಿಕ ಆದಿದೈವಿಕಗಳೆಂಬ ತಾಪತ್ರಯದ ಕೋಟಲೆಯನ್ನು ಪರಿಹರಿಸಿ ಮನಸ್ಸಿನ ದುಷ್ಟತನ ಬಿಡಿಸಿ ಕಾಮ, ಕ್ರೋಧ, ಮದ, ಲೋಭ, ಮೋಹ, ಮತ್ಸರಗಳೆಂಬ ಅರಿಷಡ್ ವೈರಿಗಳನ್ನು ಗೆದ್ದು ಗುರುಹಿರಿಯರಲ್ಲಿ ಭಕ್ತಿಯಿಟ್ಟು ಬ್ರಹ್ಮಜ್ಞಾನದ ಮಾರ್ಗವನ್ನು ತಿಳಿಯಲು ಯತ್ನಿಸಬೇಕು. ವೈ ಬಿ ಕಡಕೋಳ ಸಂಪಾದಕತ್ವದಲ್ಲಿ ಹೊರತಂದ ಲೂಸಿ ಸಾಲ್ಡಾನಾ ಗುರು ಮಾತೆ ಸಂಗ್ರಹಿಸಿದ ಅನುಭವಾಮೃತ ನುಡಿಗಳು ಕೃತಿ ಮಹತ್ವದ್ದು ಎಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿಯವರು ತಿಳಿಸಿದರು.
ಅವರು ಧಾರವಾಡ ಜಿಲ್ಲೆಯ ಜಿಲ್ಲಾ ನೌಕರರ ಸಂಘದ ಸಭಾಂಗಣದಲ್ಲಿ ಜರುಗಿದ ಸ್ಟಾರ್ ಆಪ್ ಕರ್ನಾಟಕ ಹಾಗೂ ವೈ ಬಿ ಕಡಕೋಳ ಸಂಪಾದಿತ ಅಮೃತಾಮೃತ ನುಡಿಗಳು ಲೋಕಾರ್ಪಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಪಂಡಿತ ಆವುಜಿ ಪುಸ್ತಕ ಲೋಕಾರ್ಪಣೆ ಗೊಳಿಸಿ “ದತ್ತಿದಾನಿ ಲೂಸಿ ಸಾಲ್ಡಾನಾ ಗುರು ಮಾತೆ ಸಂಗ್ರಹಿಸಿ ದ ನುಡಿ ಮುತ್ತುಗಳು ಜೊತೆಗೆ ಅವರ ಬದುಕಿನ ಬಗ್ಗೆ ಕವನ ಅಭಿಪ್ರಾಯ ಹಲವು ಸಂಗತಿಗಳನ್ನು ಸೇರಿಸಿ ವೈ ಬಿ ಕಡಕೋಳ ಕೃತಿ ರೂಪಿಸಿರುವುದು ಬಹಳ ಅಮೂಲ್ಯ ಕಾರ್ಯ.ಈ ಕೃತಿಯ ಪ್ರತಿ ಪುಟವು ಅಮೂಲ್ಯ. ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ಕಾರ್ಯ ಶ್ಲಾಘನೀಯ” ಎಂದು ಹೇಳಿದರು.
ಡಾ. ರಮೇಶ ಮಹದೇವಪ್ಪನವರ ಉದ್ಘಾಟನಾ ಮಾತುಗಳನ್ನು ಹೇಳಿ “ನಾಡು ಮೆಚ್ಚುವ ಕಾರ್ಯ ಸ್ಟಾರ್ ಆಪ್ ಕರ್ನಾಟಕ” ಕಾರ್ಯ ಕ್ರಮ ಅಭಿನಂದನಾರ್ಹ ಎಂದು ನುಡಿದರು.
ಚಂದ್ರಶೇಖರ ಮಾಡಲಗೇರಿ ಆಶಯ ನುಡಿ ಗಳನ್ನು ಹೇಳಿದರು. ಕಾರ್ಯಕ್ರಮ ದ ವೇದಿಕೆಯಲ್ಲಿ ಮಕ್ಕಳ ಮಹರ್ಷಿ ಶಂಕರ ಹಲಗತ್ತಿ. ವಿದ್ಯಾ ನಾಡಿಗೇರ. ಹಾಲೇಶ ನವುಲೆ, ಲೂಸಿ ಸಾಲ್ಡಾನಾ. ವಿ. ಪಿ. ಜಾಕೋಜಿ.ವೈ ಬಿ ಕಡಕೋಳ. ಎಲ್ ಐ, ಲಕ್ಕಮ್ಮನವರ. ಅನ್ನಪೂರ್ಣ ಆಸ್ಕಿ.ಕುಮಾರ್ ಕೆ ಎಫ್. ಎಸ್ ಎಫ್ ಸಿದ್ದನಗೌಡರ. ವಿದ್ಯಾ ದೇವಗಿರಿ. ಮೊದಲಾದ ಹಿರಿಯ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಂಕರ ಹಲಗತ್ತಿ ಮಾತನಾಡಿ ಒಬ್ಬ ವ್ಯಕ್ತಿಯ ಕುರಿತಂತೆ ಕೃತಿ ರೂಪಿಸಿದ ವೈ ಬಿ ಕಡಕೋಳ ಅವರು ಅಭಿನಂದನಾರ್ಹ. ಲೂಸಿ ಸಾಲ್ಡಾನಾ ಅವರನ್ನು ಎಷ್ಟು ಹೊಗಳಿದರೂ ಸಾಲದು. ನಮ್ಮ ನಡುವಿನ ಜೀವಂತ ದಂತಕಥೆ ಲೂಸಿ ಸಾಲ್ಡಾನಾ. ಸರ್ಕಾರಿ ಶಾಲೆಗಳ ಉಳಿಸಿ ಬೆಳೆಸುವ ಕಾರ್ಯ ನಾವೆಲ್ಲರೂ ಮಾಡಬೇಕು.ಎಂದು ಹೇಳಿದರು.
ವಿದ್ಯಾ ನಾಡಿಗೇರ ಮಾತನಾಡಿ “ಈ ಕೃತಿಯಲ್ಲಿ ಮೂಡಿ ಬಂದ ಅನುಭವಾಮೃತ ನುಡಿಗಳು ಬಹಳ ಅಮೂಲ್ಯ.ನಾವು ಕೂಡ ಪ್ರತಿ ನಿತ್ಯ ಅನುಭವ ನುಡಿಗಳನ್ನು ನೋಡಿ ನಾವು ಕೂಡ ಸಂಗ್ರಹ ಮಾಡಬಹುದು ಆ ರೀತಿಯ ಕಾರ್ಯ ಲೂಸಿ ಸಾಲ್ಡಾನಾ ಮಾಡಿರುವುದು ವೈ ಬಿ ಕಡಕೋಳ ಈ ಇಬ್ಬರ ಕಾರ್ಯವನ್ನು ಎಷ್ಟು ಹೊಗಳಿದರೂ ಶ್ಲಾಘನೀಯ”ಎಂದು ಹೇಳಿದರು.
ಹಾಲೇಶ ನವುಲೆ ಮಾತನಾಡಿ “ಉತ್ತಮ ಶಾಲೆಗಳನ್ನು ಗುರುತಿಸಿ ಇಂದು ಸನ್ಮಾನ ಮಾಡುತ್ತಿರುವ ಈ ಕಾರ್ಯಕ್ರಮದ ರೂವಾರಿ ಗಳಿಗೆ ಧನ್ಯವಾದಗಳು” ಎಂದು ಹೇಳಿದರು.
ಅಧ್ಯಕ್ಷೀಯ ನುಡಿಗಳನ್ನು ಎಸ್ ಎಫ್ ಸಿದ್ದನಗೌಡ ರ ಹೇಳಿದರು.
ಇದೇ ಸಂದರ್ಭದಲ್ಲಿ ಸ್ಟಾರ್ ಆಪ್ ಕರ್ನಾಟಕ. ಉತ್ತಮ ಶಾಲೆ. ದ್ರೋಣಾಚಾರ್ಯ ಪ್ರಶಸ್ತಿ ಗಳನ್ನು ಪ್ರಧಾನ ಮಾಡಲಾಯಿತು. ಈ ಕಾರ್ಯಕ್ರಮವನ್ನು ಶಿಕ್ಷಕ ಆರ್ ಎಂ ಕುರ್ಲಿ ನಿರೂಪಿಸಿದರು
ಕಾರ್ಯ ಕ್ರಮದ ಪ್ರಾರಂಭದಲ್ಲಿ ವೈ ಬಿ ಕಡಕೋಳ ಸ್ವಾಗತಿಸಿದರು. ಸಂಗೀತ ಮಠಪತಿ ನಿರೂಪಿಸಿದರು. ವಿದ್ಯಾ ದೇವಗಿರಿ ಪ್ರಾರ್ಥನೆ ಗೀತೆ ಹೇಳಿದರು. ಚಂದ್ರಶೇಖರ ಮಾಡಲಗೇರಿ ವಂದಿಸಿದರು
