*ಯರಗಟ್ಟಿ ಬಸವೇಶ್ವರ ಜಾತ್ರೆಯಲ್ಲಿ ಮುಸ್ಲಿಂ ಸಮಾಜದವರಿಂದ ಪ್ರಸಾದ ಸೇವೆ*
ಜಾತಿ ವ್ಯವಸ್ಥೆ, ಸಾಮಾಜಿಕ ತಾರತಮ್ಯ, ಶೋಷಣೆ, ಮೂಢನಂಬಿಕೆಯ ವಿರುದ್ಧ ಸಮರ ಸಾರಿದ
ಜಗಜ್ಯೋತಿ, ಕ್ರಾಂತಿಯೋಗಿ
‘ಬಸವ ಜಯಂತಿಯ ನಿಮಿತ್ಯ

ಯರಗಟ್ಟಿ ಪಟ್ಟಣದ ಬಸವೇಶ್ವರ ಜಾತ್ರೆಯಲ್ಲಿ ಮುಸ್ಲಿಂ ಸಮಾಜದವರಿಂದ ಪ್ರಸಾದ ಸೇವೆ ಯರಗಟ್ಟಿ ಪಟ್ಟಣದಲ್ಲಿ ಭಾವೈಕ್ಯತೆ ಸಂಕೇತದ ಪ್ರತೀಕವಾದ ಮರಡಿ ಬಸವೇಶ್ವರ ಜಾತ್ರೆಯಲ್ಲಿ ಇಂದು ಸಮಸ್ತ ಮುಸ್ಲಿಂ ಭಾಂದವರಿಂದ ಪ್ರಸಾದ ಸೇವೆ ಮಾಡಲಾಯಿತು.

ಈ ಸುಂದರ ಕ್ಷಣ ಯರಗಟ್ಟಿ ಪಟ್ಟಣದಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಬಾಳಲು ಇತಿಹಾಸ ಬರೆದಿಡುವಂತಹಕ್ಕೆ ಸಾಕ್ಷಿ ಎಂದು ನಮ್ಮ ಈ ವಾಹಿನಿ ಜೊತೆ ಮಾತನಾಡುತ್ತಾ ಮುಸ್ಲಿಂ ಯುವ ಮುಖಂಡರು *ಇಮ್ತಿಯಾಜ್ ಖಾದ್ರಿ* ಹೇಳಿದರು.
ಈ ಸುವರ್ಣ ಅವಕಾಶ ನಮ್ಮ ಮುಸ್ಲಿಂ ಸಮಾಜಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಬಸವೇಶ್ವರ ಜಾತ್ರಾ ಕಮಿಟಿಗೆ ಎಲ್ಲ *ಮುಸ್ಲಿಂ ಬಾಂಧವರು ಅಭಿನಂದನೆಗಳನ್ನು ಸಲ್ಲಿಸಿದರು.*
ಈ ವೇಳೆ ಎ, ಎಮ್, ಹಾದಿಮನಿ, ಸದಾನಂದ ಹಣಬರ, ಕುಮಾರ ಹಿರೇಮಠ, ದುಂಡಯ್ಯ ಕರ್ಜಗಿಮಠ, ಆಬಿದ ಜಮಾದಾರ್, ಇಮಾಮಸಾಬ ಹುಸೈನನೈಕರ, ಕಾಸಿಮ್ ಹೊರಟ್ಟಿ, ಆಸೀಫ್ ಗೋಕಾಕ್, ದಿಲಾವರ್ ಕರ್ನಾಚಿ, ರಾಜು ಗೋಕಾಕ್, ಸಿರಾಜ್ ನದಾಫ್, ರಾಜು ಕತ್ತಿಶೆಟ್ಟಿ, ಗೋಕಾಕ, ನಜಿರ್ ನದಾಫ್, ಸಲೀಮ್ ಜಮಾದಾರ, ಮಂಜು ಬೆಣ್ಣಿ, ರಜಾಕ್ ದಿಲಾವರ ನೈಕ್, ,ಪೀರ ಸಾಬ ತಹಸೀಲ್ದಾರ್,ದಿಲಾವರಸಾಬ ಸಿಕ್ಕಲಗಿ,ಲಿಯಾಖತ್ ಬಾಗವಾನ,ಮುನ್ನಾ ಶಬಶಾಖಾನ ಮುಂತಾದವರು ಉಪಸ್ಥಿತರಿದ್ದರು.
