*ಜಗತ್ತಿಗೆ ವೈಚಾರಿಕತೆಯ ಬೆಳಕು ನೀಡಿದ ಬಸವಣ್ಣನವರು*
*ಬಿ ಎನ್ ಬ್ಯಾಳಿ*
ಸವದತ್ತಿ: ಆಡು ಭಾಷೆಯಲ್ಲಿ ಸರಳವಾಗಿ ಜನರಿಗೆ ಅರ್ಥವಾಗುವಂತೆ ವಚನಗಳನ್ನು ರಚನೆ ಮಾಡಿದ ಬಸವಣ್ಣನವರು, ಸಮಾಜದಲ್ಲಿ ಹಲವಾರು ಬದಲಾವಣೆಗಳನ್ನು ತಂದರು. ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ಹೋಗಲಾಡಿಸಿದರು.ಜಗತ್ತಿಗೆ ವೈಚಾರಿಕತೆಯ ಬೆಳಕು ನೀಡಿದ ಬಸವಣ್ಣನವರು
ಎಂದು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ ಎನ್ ಬ್ಯಾಳಿ ಹೇಳಿದರು.
ಅವರು ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರ ದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರ ಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಳಾದ ವ್ಹಿ.ಎನ್.ಹಿರೇಮಠ.ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಎಸ್. ಬಿ. ಬೆಟ್ಟದ.ವೈ.ಬಿ.ಕಡಕೋಳ.ಡಿ.ಎಲ್.ಭಜಂತ್ರಿ.ರವಿ ನಲವಡೆ.ರಾಮಚಂದ್ರ ಬಿ.ಎಂ.ಚಿದಾನಂದ ಬಾರ್ಕಿ ಎಚ್ ಎಲ್ ನದಾಪ. ಕುಶಾಲ್ ಮುದ್ದಾಪುರ ಈರಪ್ಪ ಅವರಾದಿ.ಮೊದಲಾದವರು ಉಪಸ್ಥಿತರಿದ್ದರು.
ಡಿ ಎಲ್ ಭಜಂತ್ರಿ. ಸ್ವಾಗತಿಸಿದರು. ವ್ಹಿ. ಸಿ. ಹಿರೇಮಠ ಪ್ರಸ್ತಾವಿಕವಾಗಿ ಮಾತನಾಡಿದರು. ವೈ ಬಿ ಕಡಕೋಳ ನಿರೂಪಿಸಿದರು. ಎಸ್ ಬಿ ಬೆಟ್ಟದ ವಂದಿಸಿದರು.
