ಇಂದು ಎಲ್ಐಸಿ ಕಛೇರಿಯಲ್ಲಿ 68 ನೇ ವಾರ್ಷಿಕೋತ್ಸವ ಕಾರ್ಯಕ್ರಮ :
ಸವದತ್ತಿ : ಪಟ್ಟಣದ ಎಲ್ಐಸಿ ಕಛೇರಿಯಲ್ಲಿ ಸೆಪ್ಟಂಬರ್ 2 ಸೋಮವಾರ ಬೆಳಗ್ಗೆ 10 ಗಂಟೆಗೆ ವಿಮಾ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ ಹಾಗೂ ವಿಮಾ ಸಪ್ತಾಹದ ನಿಮಿತ್ತ ವಿಮಾ ಜಾಥಾ ರ್ಯಾಲಿ ಅಯೋಜಿಸಲಾಗಿದೆ
ಎಲ್ಲಾ ವಿಮಾ ಪ್ರತಿನಿಧಿಗಳು ಸಮಯಕ್ಕೆ ಸರಿಯಾಗಿ ಸಮಾರಂಭಕ್ಕೆ ಹಾಜರಾಗಲು ಕೋರಲಾಗಿದೆ.ವಿಮಾ ಜಾಥಾ ರ್ಯಾಲಿಯಲ್ಲಿ ಪ್ರತಿಯೊಬ್ಬ ಪ್ರತಿನಿಧಿ ಬಿಳಿ ಶರ್ಟ್ ಧರಿಸಿ ಬರಬೇಕೆಂದು ಕೋರಲಾಗಿದೆ.
ವಿಮಾ ಜಾಥಾ ಮೆರವಣಿಗೆ ಮಧ್ಯಾಹ್ನ 3 ಘಂಟೆಗೆ ಲಿಂಗರಾಜ ಸರ್ಕಲ್ ದಿಂದ ಪ್ರಾರಭವಾಗಿ ಯೂನಿಯನ್ ಬ್ಯಾಂಕ್, ಪೊಸ್ಟ್ ಆಫೀಸ್, ಗಾಂಧಿಚೌಕ, ಆನಿ ಅಗಸಿ, ಕಡಕೋಳ ಬ್ಯಾಂಕ್ ಸರ್ಕಲ್, ಮಾರ್ಗವಾಗಿ ಲಿಂಗರಾಜ ಸರ್ಕಲ್ ತಲುಪುವುದು.
ನಂತರ ಎಲ್ಐಸಿ ಕಛೇರಿಯಲ್ಲಿ ಉಪಹಾರದ ವ್ಯವಸ್ಥೆ ಮಾಡಲಾಗಿದ್ದು , ಎಲ್ಐಸಿಯ ಎಲ್ಲ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಹಿರಿಯ ಶಾಖಾ ವ್ಯವಸ್ಥಾಪಕರರಾದ ಸಂಜಯ ಕದಂಬ ಅವರು ಸವದತ್ತಿ ಬ್ರೇಕಿಂಗ್ ನ್ಯೂಸ್ ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
