* ಸುರೇಶ ಹಣಮಂತ ಇಂಚಲ, ಲೈನ್ ಮೆನ್ ವಿದ್ಯುತ್ ಅವಘಡ ಸಾವು*
ಸವದತ್ತಿ ಪಟ್ಟಣದ ರಾಮಾಪೂರಸೈಟ್ ನಿವಾಸಿ ಸುರೇಶ ಹಣಮಂತ ಇಂಚಲ (46) ಲೈನ್ ಮೆನ್ ಕರ್ತವ್ಯದ ವೇಳೆ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದಾರೆ.
ಧಾರವಾಡ ಹುಬ್ಬಳ್ಳಿ ನೀರು ಸರಬರಾಜು ಜಾಕವೇಲ್ ಬಳಿ ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಗುಲಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಮೃತರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ.ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
