ಸವದತ್ತಿ ನಗರದಲ್ಲಿ ರವಿವಾರದಂದ ವಿದ್ಯುತ್ ವ್ಯತ್ಯಯ
ಸವದತ್ತಿ : 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೇ ತ್ರೈಮಾಸಿಕ ನಿರ್ವಹಣೆ ಹಾಗೂ ತುರ್ತು ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ನಾಳೆ ಜೂನ್ 07 ರಂದು ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಸವದತ್ತಿ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಅಂಬೇಡ್ಕರ್ ನಗರ, ಗೊಲ್ಲರ ಓಣಿ, ಅತ್ತಾರ ಓಣಿ, ಮಟನ್ ಮಾರ್ಕೆಟ್ ರೋಡ್, ಬಸವ ಸದನ ನಗರ, ನುರಾನಿ ಗಲ್ಲಿ, ಎಪಿಎಂಸಿ ಆವರಣ, ಜೋಗುಳ ಭಾವಿ ರಸ್ತೆ, ಕಡಕೋಳ ಬ್ಯಾಂಕ್, ಹೊಸಪೇಟ ಓಣಿ, ಗಿರಿಜನ್ನವರ್ ಓಣಿ, ಅನಿಅಗಸಿ, ಕೊಳ್ಳಾರ್ ಓಣಿ, ಕೆಎಚ್ಬಿ ಕಾಲೋನಿ, ಶ್ರೀನಗರ ಹಾಗೂ ಮುಕಾಶಿ ಓಣಿ. ಜಾಕ್ ವೆಲ್, ಘಟಕಕ್ಕೂ ವಿದ್ಯುತ್ ವ್ಯತ್ಯಯ ಉಂಟಾಗಲಿರುವುದರಿಂದ, ಸಾರ್ವಜನಿಕರ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.