ಸವದತ್ತಿ ನಗರದ ಶ್ರೀ ಜಿ. ಜಿ. ಚೋಪ್ರಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಂದಿ ಭಾಷಾ ಉಪನ್ಯಾಸಕರಾದ ಶ್ರೀ ಸುರೇಶ ಕೆ. ರಾಕ್ಷೆ ಅವರ ವಯೋ ನಿವೃತ್ತಿ ಹೊಂದಿದ ಪ್ರಯುಕ್ತ ಗೌರವ ಸಮರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಗಳಾದ ನಿವೃತ್ತ ಉಪನ್ಯಾಸಕರಾದ ವ್ಹಿ. ಎಸ್. ಹಿರೇಮಠ ಮಾತನಾಡಿ ಶಿಕ್ಷಕ ವೃತ್ತಿ ತುಂಬಾ ಪವಿತ್ರವಾದದ್ದು, ಉತ್ತಮ ಶಿಕ್ಷಣದಿಂದ ಮಾತ್ರ ಸದೃಢ ಸಮಾಜವನ್ನು ನಿರ್ಮಿಸಲು ಸಾಧ್ಯ. ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿ ಪ್ರವೃತ್ತಿಯಲ್ಲಿ ಮುಂದುವರೆದು ಕೌಟುಂಬಿಕ ಜೀವನ ಮತ್ತು ಆರೋಗ್ಯದತ್ತ ಗಮನ ಹರಿಸಲು ಸಲಹೆ ನೀಡಿದರು. ಅತಿಥಿಗಳಾದ ವೈ. ಎಂ. ಯಾಕೊಳ್ಳಿ, ಎಸ್. ಬಿ. ಕಿವುಡಿ, ಐ. ಎಂ. ಅಂಬಿ ಮತ್ತು ವಿವೇಕ್ ದಿವಟೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಆರ್. ಪಿ. ಕೌಜಲಗಿ ಮಾತನಾಡಿ ನಿವೃತ್ತಿ ಹೊಂದಿದ ಉಪನ್ಯಾಸಕರ ಸೇವಾಮನೋಭಾವ ಮತ್ತು ಪ್ರಾಮಾಣಿಕ ಕಾರ್ಯವೈಖರಿ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆರ್. ಸಿ. ಬಾರಾಟಕ್ಕೆ, ಎಸ್. ಎಂ. ಪಾಟೀಲ್, ಶ್ರೀದೇವಿ ಹಂಜೆ, ಜ್ಯೋತಿ ಬಿಳಗಿ, ಗಿರಿಜಾ ಕೋದಂಪುರ, ಶಿಲ್ಪಾ ಪೂಜೇರ, ಸೌಜನ್ಯ ಕುಲಕರ್ಣಿ,ಎಸ್.ಪಿ ಪಾಟೀಲ್, ಆನಂದ ಯರಗಟ್ಟಿ, ಮಂಜುನಾಥ ಹುಲ್ಲೂರ, ಗಿರಿಜಾ ಹುಂಡನವರ ಇತರರಿದ್ದರು . ಮಂಜುಳಾ ತೇಗುರ ಕಾರ್ಯಕ್ರಮ ನಿರೂಪಿಸಿದರು. ಉಮಾದೇವಿ ಎಂ ವಂದಿಸಿದರು.