ಸವದತ್ತಿ: ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಶತಮಾನೋತ್ಸವದ ಸಂದರ್ಭದಲ್ಲಿ ಬೂತ್, ಮಂಡಲ, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ಸಮಿತಿಯ ಜಿಲ್ಲಾ ಸಂಚಾಲಕ ಹಾಗೂ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಇಲ್ಲಿನ ಮಾಮನಿ ಕಲ್ಯಾಣ ಮಂಟಪದಲ್ಲಿ ಶನಿವಾರ

ಭಾರತೀಯ ಜನತಾ ಪಾರ್ಟಿ ಸವದತ್ತಿ ಮಂಡಲ ವತಿಯಿಂದ ನಡೆದ ಅಟಲ್ ಜೀ ಜನ್ಮ ಶತಮಾನೋತ್ಸವ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮಂಡಳ ಅಧ್ಯಕ್ಷ ವಿರೂಪಾಕ್ಷ ಮಾಮನಿ ಮಾತನಾಡಿ, ಸಾಹಿತ್ಯಗಳ ಪ್ರದರ್ಶನ, ಭಾಷಣ ಸ್ಪರ್ಧೆ, ಕಾರ್ಯಕರ್ತರ ಸನ್ಮಾನ, ಅಟಲ್ ಜೀ ಅವರ ಅಪಾರ ಕೊಡುಗೆಗಳ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.
ಫೆ.೧೫ರಿಂದ ಮಾ.೧೫ರವರೆಗೆ ಜಿಲ್ಲಾ ಮಟ್ಟದಲ್ಲಿ ಅಟಲ್ ವಿರಾಸತ್ ಸಮ್ಮೇಳನ ಆಯೋಜಿಸಲಾಗುವುದು. ಅಲ್ಲಿಯೂ ಅಟಲ್ ಜೀ ಅವರ ಬಗ್ಗೆ ಹಲವಾರು ಪುಸ್ತಕಗಳ ಪ್ರದರ್ಶನ, ಹಿರಿಯರ ಗೌರವ, ಅಟಲ್ ಜೀ ಅವರ ಹೋರಾಟದ ದಾರಿಯಲ್ಲಿ ಬೆಳೆದುಬಂದ ವ್ಯಕ್ತಿಗಳಿಗೆ ಗೌರವ ಸಲ್ಲಿಸುತ್ತೇವೆ.
ಅಟಲ್ಜೀ ಅವರು ದೇಶದ ಅಪರೂಪದ ನಾಯಕ, ಯುವಪೀಳಿಗೆ ಮತ್ತು ನಾಗರಿಕರಿಗೆ ಅವರ ಕೊಡುಗೆ- ಸಾಧನೆಯನ್ನು ಪರಿಚಯಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದರು. ಇದಕ್ಕಾಗಿ ಎಲ್ಲ ರೀತಿಯ ತಯಾರಿ ನಡೆಸಲಾಗುತ್ತಿದೆ ಎಂದರು.
ಈ ವೇಳೆ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ರತ್ನಾಕ್ಕ ಮಾಮನಿ, ಬಸವರಾಜ ಕಾರದಗಿ, ಜಗದೀಶ ಕೌಜಗೇರಿ, ಜಗದೀಶ ಶಿಂತ್ರಿ, ಜಿಲ್ಲಾ ಸಹ ಸಂಚಾಲಕರಾದ ಸುಭಾಸ ಸಣ್ಣವೀರಪ್ಪನ್ನವರ, ಸಚಿನ ಕಡಿ, ಡಾ. ನಯನಾ ಭಸ್ಮೆ, ಜೊತ್ಯಿ ಅಣ್ಣಿಗೇರಿ, ಹಾಗೂ ಮುಖಂಡರು, ಹಿರಿಯರು, ಪುರಸಭೆ ಸದಸ್ಯರು, ಗ್ರಾ. ಪಂ. ಸದಸ್ಯರು, ಕಾರ್ಯಕರ್ತರು, ಹಾಗೂ ಬಿಜೆಪಿಯ ಎಲ್ಲ ಪದಾಧಿಕಾರಿಗಳು ಉಪಸ್ಥಿತಿರಿದ್ದರು.
