ಚೆನ್ನಮ್ಮನ ಕಿತ್ತೂರ ಪಟ್ಟಣದಲ್ಲಿ ಸಂಭ್ರಮದಿಂದ ಗಣೇಶನನ್ನು ಬರಮಾಡಿಕೊಳ್ಳಲಾಯಿತು
ಚೆನ್ನಮ್ಮನ ಕಿತ್ತೂರ : ಪ್ರತಿವರ್ಷದಂತೆ
ತಮ್ಮ ಮನೆ ಹಾಗೂ ವಿವಿಧ ಬಡಾವಣೆಗಳ ಸಾರ್ವಜನಿಕ ಮಂಟಪಗಳಲ್ಲಿ ಪ್ರತಿಷ್ಠಾಪಿಸಲು ಜನರು ಗಣಪನ ಮೂರ್ತಿಗಳನ್ನು ಹೊತ್ತು ತಂದರು. ಪಟಾಕಿಗಳನ್ನು ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಎಲ್ಲರಿಗೂ ಒಳಿತಾಗಲೆಂದು ಗಣೇಶನಲ್ಲಿ ಪೂಜಿಸಿದರು. ಭಜನೆ, ಕೋಲಾಟ,ಜಾಂಝ ಫಥಕ್,ಡೋಲ,ತಾಶಾ, ಮೆರವಣಿಗೆಗೆ ಗಮನಸೆಳೆದರು.
ಇತ್ತ ಕಿತ್ತೂರ ಪೊಲೀಸ್ ಠಾಣೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಯಿತು. ಅಧಿಕಾರಿಗಳು ಹಾಗೂ ಸಿಬ್ಬಂದಿ ಒಂದೇ ತರಹದ ಬಟ್ಟೆ ಧರಿಸಿದ್ದರು.
ಗುರುವಾರ ಪೇಟೆಯಿಂದ, ಅರಳಿಕಟ್ಟಿ ಸರ್ಕಲ್ ಮಾರ್ಗವಾಗಿ ಪೊಲೀಸ್ ಠಾಣೆಯವರೆಗೆ ನಡೆದ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ಸಿಪಿಐ ಶಿವಾನಂದ ಗುಡಗನಟ್ಟಿ ಅವರು ಜನರಿಗೆ ಶುಭಕೋರಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ಜನರಲ್ಲಿ ಮನವಿ ಮಾಡಿದರು.
ಈ ವೇಳೆ ಪಿಎಸ್ಐ ಪ್ರವೀಣ ಗಂಗೋಳ,ಪಿಎಸ್ಐ ಪ್ರವೀಣ ಕೋಟೆ,ಎಎಸ್ಐ ರಮೇಶ ಗಜೇರಿ,ಎನ್.ಪಿ.ನಾಯಕ,ಎಮ್.ಆಯ್.ಹಣಬರ,ವಿಶಾಲ ಹಡಪದ, ಗೌರಮ್ಮ ಪಾರಿಶವಾಡ, ಲಕ್ಷ್ಮೀ ಕುಂಬಾರ, ಯುವಕರು ಮತ್ತು ಮಕ್ಕಳು ಸೇರಿ ಉಪಸ್ಥಿತರಿದ್ದರು.
