: ಬೆಳೆ ವಿಮೆ ಆಕ್ಷೇಪಣೆ ಸಲ್ಲಿಸಲು ಅವಕಾಶ :
: ಸವದತ್ತಿ 245 ಹಾಗೂ ಯರಗಟ್ಟಿಯಲ್ಲಿ 67 ತಿರಸ್ಕೃತ ಅರ್ಜಿ :
ಸವದತ್ತಿ : 2023-24 ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಸಲ್ಲಿಕೆಯಾದ ಅರ್ಜಿಗಳಲ್ಲಿ ಸವದತ್ತಿ ತಾಲ್ಲೂಕಿನ ಮುಂಗಾರು ಹಂಗಾಮಿನ 168, ಹಿಂಗಾರು ಹಂಗಾಮಿನ 77 ಅರ್ಜಿಗಳು ಸೇರಿ ಒಟ್ಟು 245 ಹಾಗೂ ಯರಗಟ್ಟಿ ತಾಲ್ಲೂಕಿನ ಮುಂಗಾರು ಹಂಗಾಮಿನ 57, ಹಿಂಗಾರು ಹಂಗಾಮಿನ 10 ಸೇರಿ ಒಟ್ಟು 67 ಅರ್ಜಿಗಳು ತಿರಸ್ಕೃತ ಗೊಂಡಿವೆ ಎಂದು ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ತಿರಸ್ಕೃತಗೊಂಡ ಅರ್ಜಿಗಳ ಪಟ್ಟಿಯನ್ನು ಈಗಾಗಲೇ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರಗಳಾದ ಸವದತ್ತಿ, ಮುನವಳ್ಳಿ, ಮುರಗೋಡ ಹಾಗೂ ಯರಗಟ್ಟಿ ಕಛೇರಿಗಳಲ್ಲಿ ಪ್ರದರ್ಶಿಸಿದ್ದು ಸದರಿ ಪಟ್ಟಿಯಲ್ಲಿನ ರೈತರಿಗೆ ಯಾವುದೇ ಆಕ್ಷೇಪಣೆಗಳಿದ್ದರೆ ರೈತರು ವಿಮೆ ಮಾಡಿಸಿದ ಬೆಳೆಯನ್ನು ಬೆಳೆದಿರುವ ಕುರಿತು ಸೂಕ್ತ ದಾಖಲೆಗಳಾದ 2023-24 ನೇ ಸಾಲಿನ ಪಹಣಿಯಲ್ಲಿ (ಉತಾರ) ವಿಮೆಗೆ ನೊಂದಾಯಿಸಿದ ಬೆಳೆಯಿದ್ದಲ್ಲಿ ನೀಡುವುದು, ವಿಮೆಗೆ ನೊಂದಾಯಿತ ಬೆಳೆಯ ಉತ್ಪನ್ನವನ್ನು ಎಪಿಎಂಸಿಯಲ್ಲಿ ಮಾರಾಟ ಮಾಡಿದ ರಶೀದಿ, ಕನಿಷ್ಠ ಬೆಂಬಲ ಬೆಲೆ ಯೋಜನೆ ಪಡೆದಿದ್ದಲ್ಲಿ ರಶೀದಿಯೊಂದಿಗೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಸವದತ್ತಿ ಅಥವಾ ಸಂಬಂದಿಸಿದ ರೈತ ಸಂಪರ್ಕ ಕೇಂದ್ರಗಳಿಗೆ ಫೆಬ್ರುವರಿ 28 ರ ಒಳಗಾಗಿ ಸಲ್ಲಿಸಬೇಕಾಗಿದೆ.
