*ಶಾಂತಿಯುತವಾಗಿ ಜರುಗಿದ ರಂಜಾನ್ ಹಬ್ಬ*
ಸವದತ್ತಿ : ಒಂದು ತಿಂಗಳ ಕಾಲ ಪವಿತ್ರ ರಂಜಾನ್ ಮಾಸದ ಉಪವಾಸ ಆಚರಣೆಯ ಬಳಿಕ ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ರಾಮಾಪುರಸೈಟ್ ತಾಲೂಕಿನಾಂದ್ಯಂತ ಈದ್ ಉಲ್ ಫಿತರ್ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸಿದರು.
ಈದ್ ಉಲ್ ಫಿತರ್ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ರಾಮಾಪುರಸೈಟ್ ಈದ್ಗಾ ಮೈದಾನದಲ್ಲಿ ನೂರಾರು ಮುಸ್ಲಿಂ ಬಾಂಧವರು ನಮಾಜ್ ನಲ್ಲಿ ಪಾಲ್ಗೊಂಡರು.
ಪಟ್ಟಣದ ಈದ್ಗಾ ಮೈದಾನದಲ್ಲಿ ನೂರಾರು ಮಂದಿ ಮುಸ್ಲಿಮರು ವಿಶೇಷ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದರು.
ನಮಾಜ್ ಬಳಿಕ ಎಲ್ಲರೂ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು ಬಡವರಿಗೆ ದಾನ, ಧರ್ಮ, ಮಾಡಿದರು.
ಈ ವೇಳೆ ರಾಜೇಸಾಬ ದೊಡವಾಡ, ಶಾಹಾಜಾನ ಸಂಗೊಳ್ಳಿ, ಮಕ್ತುಮಸಾಬ,ಧೂಪದಾಳ, ಶೌಕತ ಅತ್ತಾರ, ದಿಲಾವರ ಮುಲ್ಲಾ, ಮಹೆಬೂಬಸಾಬ ಬೆಟಗೇರಿ, ಅಬುಬ್ಕರ್ ಪೆಂಡಾರಿ,ದಿಲಾವರ ದೊಡವಾಡ, ರಪೀಕ ಮುಧೋಳ, ಹಾಗೂ ಯುವಕರಾದ ಮಕ್ತುಮಹುಸೇನ ಇಂಚಲ, ನಜೀರ ಧೂಪದಾಳ, ಸಲೀಂ ಅಕ್ಕಿ, ತಾಜುದ್ದಿನ ಬೆಟಗೇರಿ, ಅಸಲಮ್ ಅಕ್ಕಿ, ಮಕ್ತುಮಹುಸೇನ ತಹಶೀಲ್ದಾರ, ಮತ್ತು ಮಕ್ಕಳು ಸೇರಿ ಭಾಗವಹಿಸಿದರು
