*ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಲು ಕರೆ ಮಹಾಂತೇಶ ಕೌಜಲಗಿ*
ಸವದತ್ತಿ: ಜಗತ್ತಿನ ಎಲ್ಲ ರಂಗದಲ್ಲೂ ಸ್ಪರ್ಧೆಯಿದೆ. ಸ್ಪರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಸೋತವರು ಕುಗ್ಗದೆ ಸೋಲನ್ನು ಗೆಲುವಿನ ಮೆಟ್ಟಿಲಾಗಿಸಿಕೊಳ್ಳಬೇಕು. ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದು, ಕೆ.ಎಲ್.ಇ.ಸಂಸ್ಥೆಯ ಅಧ್ಯಕ್ಷರು ಹಾಗೂ ಬೈಲಹೊಂಗಲ ಶಾಸಕ ಮಹಾಂತೇಶ ಎಸ್.ಕೌಜಲಗಿ ಹೇಳಿದರು.
ಇಲ್ಲಿನ ಕೆ.ಎಲ್.ಇ. ಸಂಸ್ಥೆಯ ಎಸ್. ವ್ಹಿ. ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಬರೀ ಓದಿಗೆ ಸೀಮಿತರಾಗದೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಾಗಲು ಸಾಧ್ಯ. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಒಂದು ಸದವಕಾಶವಿದ್ದಂತೆ. ಅವುಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದರು. ಈ ವೇಳೆ ನಗದು ಬಹುಮಾನ ಪ್ರಾಯೋಜಕರಿಗೆ ಸತ್ಕರಿಸಲಾಯಿತು.
ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ನಗದು ಬಹುಮಾನ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಜಾನಪದ ನೃತ್ಯದಲ್ಲಿ: ಧಾರವಾಡದ ಕಿಟೆಲ್ ಮಹಾವಿದ್ಯಾಲಯ ಪ್ರಥಮ ಸ್ಥಾನ.
ಹುಬ್ಬಳ್ಳಿಯ ಕೆ.ಎಲ್.ಇ.ಸಂಸ್ಥೆಯ ಎಸ್.ಕೆ.ಕಲಾ ಮತ್ತು ಎಚ್ಚೆಸ್ಕೆ ವಿಜ್ಞಾನ ಸಂಸ್ಥೆ. ದ್ವಿತೀಯ ಸ್ಥಾನ:
ಸವದತ್ತಿಯ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಕಾಲೇಜು ತೃತೀಯ ಸ್ಥಾನ
ಸಿನಿಮಾ ಹಾಡಿನ ನೃತ್ಯದಲ್ಲಿ: ಹುಬ್ಬಳ್ಳಿಯ ಕೆ.ಎಲ್.ಇ.ಸಂಸ್ಥೆಯ ಜೆ.ಜಿ.ವಾಣಿಜ್ಯ ಕಾಲೇಜು ಪ್ರಥಮ ಸ್ಥಾನ, ಹುಬ್ಬಳ್ಳಿಯ ಕೆ.ಎಲ್.ಇ.ಸಂಸ್ಥೆಯ ವಾಣಿಜ್ಯ ಕಾಲೇಜು ದ್ವಿತೀಯ ಸ್ಥಾನ, ಸವದತ್ತಿಯ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡಿದೆ.
ದೇಶಭಕ್ತಿ ಗೀತೆ ಗಾಯನದಲ್ಲಿ: ಹುಬ್ಬಳ್ಳಿಯ ಕೆ.ಎಲ್.ಇ.ಸಂಸ್ಥೆಯ ವಾಣಿಜ್ಯ ಕಾಲೇಜು ಪ್ರಥಮ ಸ್ಥಾನ,
ಬೈಲಹೊಂಗಲದ ಕೆ.ಆರ್.ಸಿ.ಇ. ಸಂಸ್ಥೆಯ ಎ.ಬಿ.ಪಾಟೀಲ ಬಿ.ಇಡಿ. ಕಾಲೇಜು ದ್ವಿತೀಯ ಸ್ಥಾನ,
ಸವದತ್ತಿಯ ಕೆ.ಎಂ.ಮಾಮನಿ ಪ್ರಥಮ ದರ್ಜೆ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡಿದೆ.
ಜಾನಪದ ಗೀತೆ ಗಾಯನದಲ್ಲಿ: ರಾಮದುರ್ಗದ ಸಿ.ಎಸ್.ಬೆಂಬಳಗಿ ಕಾಲೇಜು ಪ್ರಥಮ ಸ್ಥಾನ,
ಬೈಲಹೊಂಗಲದ ಕೆ.ಆರ್.ಸಿ.ಇ. ಸಂಸ್ಥೆಯ ಎ.ಬಿ.ಪಾಟೀಲ ಬಿ.ಇಡಿ. ಕಾಲೇಜು ದ್ವಿತೀಯ
ಬದಾಮಿಯ ಎಸ್.ಎಸ್.ಬಿ.ಎಂ. ಪದವಿ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡಿದೆ.
ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವಿರುಪಾಕ್ಷಣ್ಣ ಮಾಮನಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು, ಈ ವೇಳೆ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಬಿ.ವಿ.ಮಲಗೌಡರ, ಉಮೇಶ ಬಾಳಿ, ಪ್ರಾಚಾರ್ಯ ಡಾ.ಎನ್.ಆರ್.ಸವತೀಕರ, ಪ್ರೊ. ಕೆ.ರಾಮರೆಡ್ಡಿ, ರಾಜಶೇಖರ ನಿಡವಣಿ, ಶ್ರೀಮತಿ ಎ.ಎ.ಹಳ್ಳೂರ, ಡಾ.ಎ.ಎಫ್.ಬದಾಮಿ, ಡಾ.ಎನ್.ಎ.ಕೌಜಗೇರಿ, ಪ್ರೊ.ಎಂ.ಸಿ.ಹಾದಿಮನಿ, ಪ್ರೊ.ವಚನ ಬಸಿಡೋಣಿ, ಪ್ರೊ. ಸುನಂದಾ ಹಟ್ಟಿ, ಬಿ.ಎಸ್.ಪುಟ್ಟಿ, ಶ್ರೀ ಎಂ.ಎಂ.ಎಲಿಗಾರ, ನಾಗರಾಜ ಸೋಗಿ, ಬಸವರಾಜ ಮಟ್ಟಿ, ಶಿವಾನಂದ ಅಂಬಿಗೇರ, ಶಶಿಧರ ಹಿಟ್ನಳ್ಳಿ, ಮಂಜುನಾಥ ಉಳ್ಳಿಗೇರಿ, ಸಂತೋಷ ಕಾಳೆ, ಶ್ರೀಮತಿ ಇಂದು ಮೀಶಿ, ಶ್ರೀ ಅಶೋಕ ವಿಘ್ನೇಶಿ, ಬಸಪ್ಪ ಮಡಿವಾಳರ, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ 26 ತಂಡಗಳ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.
