ಜನರ ಸೇವೆಯೇ ಜನಾರ್ದನ ಸೇವೆ ಬಡ ಕುಟುಂಬಗಳಿಗೆ ಅಣ್ಣನ ಉಡುಗೊರೆ
ಸವದತ್ತಿ : ಕ್ಷೇತ್ರದ ಬಡ ಕುಟುಂಬಗಳ ಕಷ್ಟಕ್ಕೆ ಹೆಗಲಾಗುವುದು ನನ್ನ ಮೊದಲ ಆದ್ಯತೆ. ಜನರ ಕಣ್ಣೀರು ಒರೆಸಿ, ಅವರ ಬದುಕಿನಲ್ಲಿ ಸಣ್ಣದೊಂದು ನೆಮ್ಮದಿಯ ಬೆಳಕು ಮೂಡಿಸುವುದೇ ನನ್ನ ಪಾಲಿನ ಸಾರ್ಥಕ ಕೆಲಸ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಕ್ಷೇತ್ರದ ಆಯ್ದ ನಾಲ್ಕು ಬಡ ಕುಟುಂಬಗಳಿಗೆ ಅಣ್ಣನ ಉಡುಗೊರೆಯನ್ನು ವಿತರಿಸಿ ಅವರು ಮಾತನಾಡಿದರು. ಈ ಊರಿನ ಮಗನಾಗಿ ಜನರ ಸೇವೆ ಮಾಡುವ ಅವಕಾಶವನ್ನು ಕ್ಷೇತ್ರದ ಮತದಾರರು ನನಗೆ ಕಲ್ಪಿಸಿದ್ದಾರೆ. ಸವದತ್ತಿಯನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿ, ಸುಂದರ ಕ್ಷೇತ್ರವನ್ನಾಗಿಸುವುದು ನನ್ನ ಗುರಿ. ಇದಕ್ಕಾಗಿ ನಿಮ್ಮೆಲ್ಲರ ಆಶೀರ್ವಾದ ಸದಾ ಇರಲಿ. ಕ್ಷೇತ್ರದ ಪ್ರತಿಯೊಬ್ಬರ ಸುಖ ದುಃಖಗಳಲ್ಲಿ ನಾನು ಭಾಗಿಯಾಗುತ್ತೇನೆ, ಮುಂದಿನ ದಿನಗಳಲ್ಲೂ ನಿಮ್ಮ ಸೇವಕನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬಡ ಕುಟುಂಬಗಳಿಗೆ ಸಂಕಷ್ಟದ ಸಮಯದಲ್ಲಿ ಆಸರೆಯಾಗಲು ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮದ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
