: ಸೆ.5 ಇಂದು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ :
ಸವದತ್ತಿ : ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಅಂಗವಾಗಿ ಶಿಕ್ಷಕರ ದಿನೋತ್ಸವ,ನಿವೃತ್ತ ಶಿಕ್ಷಕರ ಸನ್ಮಾನ ,ಪ್ರತಿಭಾ ಕಾರಂಜಿ ,ಕಲೋತ್ಸವ ಕಾರ್ಯಕ್ರಮ ಸೆಪ್ಟಂಬರ್ 5 ಇಂದು ಬೆಳಿಗ್ಗೆ 10 ಗಂಟೆಗೆ ನಗರದ ನಿಕಮ್ ಕಲ್ಯಾಣ ಮಂಟಪದಲ್ಲಿ ಶಾಸಕ ವಿಶ್ವಾಸ ವೈದ್ಯ ಅದ್ಯಕ್ಷತೆಯಲ್ಲಿ
ನಡೆಯಲಿದೆ.
ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚಣ್ಣವರ ,ಚಂದ್ರಶೇಖರ ಜಂಬ್ರಿ , ರವೀಂದ್ರ ಯಲಿಗಾರ ,ನೀಲಕಂಠ ಶಿವಬಸನ್ನವರ, ದಾವಲಬಿ ಸನದಿ, ಮಾರುತಿ ಬಸಲಿಗುಂದಿ, ವೀರನಗೌಡ ಸಂಗಣ್ಣವರ, ಬಸವರಾಜ ಆರಿಬೆಂಚಿ. ಕಾರ್ಯಕ್ರಮದಲ್ಲಿ ಸವದತ್ತಿ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ,ಯರಗಟ್ಟಿ ತಹಶೀಲ್ದಾರ ಎಂ. ಎನ್.ಮಠ, ತಾಲೂಕು ಪಂಚಾಯತ ಇಓ ಆನಂದ ಬಡಕುಂದ್ರಿ ಹಾಗೂ ತಾಲೂಕಿನ ಎಪಿಎಂಸಿ ,ಟಿಎಪಿಸಿಎಮ್ಎಸ್ ,ಪುರಸಭೆ ,ಪಂಚಾಯತ , ಪುರಸಭೆ ಸದ್ಯರು,ಕ್ಷೇತ್ರ ಸಮನ್ವಯಾಧಿಕಾರಗಳು, ತಾಲೂಕಿನ ಶಿಕ್ಷಕರು ಭಾಗವಹಿಸುವರು.ವಿಶ್ರಾಂತ ಸಹ ನಿರ್ದೇಶಕ ಎಂ. ಎಂ.ಸಿಂಧೂರಿ ಅತಿಥಿ ಉಪನ್ಯಾಸ ನೀಡುವರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
