ರಾಧಾಕೃಷ್ಣನ್ ಆದರ್ಶ ಅಳವಡಿಸಿಕೊಳ್ಳಿ : ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ
ಸವದತ್ತಿ : ಡಾ.ಎಸ್.ರಾಧಾಕೃಷ್ಣನ್ ಶಿಕ್ಷಕ, ಉಪನ್ಯಾಸಕ, ಪ್ರಾಧ್ಯಾಪಕ, ತತ್ವಜ್ಞಾನಿ, ದಾರ್ಶನಿಕರಾಗಿ ಉಪ ರಾಷ್ಟ್ರಪತಿ ಹಾಗೂ ರಾಷ್ಟ್ರಪತಿಯಾಗಿ ದೇಶದ ಅಭ್ಯುದಯಕ್ಕಾಗಿ ಶ್ರಮಿಸಿದ ಮಹಾನ ಚೇತನವಾಗಿದ್ದರು ವಿದ್ಯಾರ್ಥಿಗಳು ಡಾ.ಎಸ್.ರಾಧಾಕೃಷ್ಣನ್ ಅವರ ಆದರ್ಶಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಹೇಳಿದರು.
ಪಟ್ಟಣದ ನಿಕ್ಕಮ್ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ,ಪ್ರತಿಭಾ ಕಾರಂಜಿ ,ಕಲೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು,ಶಾಸಕ ವಿಶ್ವಾಸ ವೈದ್ಯ ಅವರು ,ಶಿಕ್ಷಣಕ್ಕೆ ಆದ್ಯತೆ ನೀಡಿ ವಿವೇಕ ಯೋಜನೆಯಡಿ ನೂತನ ಶಾಲಾ ಕೊಠಡಿಗಳ ನಿರ್ಮಾಣ, ತಾಲೂಕಿನ 2ನೂರು ಶಾಲೆಗಳನ್ನು ಪ್ರತಿ ಶಾಲೆಗೆ 2ಲಕ್ಷ ರೂ ಅನುದಾನದಲ್ಲಿ ದುರಸ್ತಿ ಕಾಮಗಾರಿ ಕೈಗೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಕೂಲವಾಗಲು ಪ್ರಥಮ ವೇತನ 2.87ಲಕ್ಷ ರೂ ಗಳಲ್ಲಿ ಸ್ಪರ್ಧಾತ್ಮಕ ಪುಸ್ತಕಗಳನ್ನು ಖರೀದಿಸಲು ಪಟ್ಟಣದ ಸರಕಾರಿ ಗ್ರಂಥಾಲಯಕ್ಕೆ ನೀಡಿದ್ದಾರೆ ಎಂದರು.
ವಿಶ್ರಾಂತ ಸಹ ನಿರ್ದೇಶಕ ಎಂ. ಎಂ.ಸಿಂಧೂರ ಉಪನ್ಯಾಸ ನೀಡಿ, ಶಿಕ್ಷಕರಿಲ್ಲದೇ ಯಾವುದೇ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಶಿಕ್ಷಕರು ತಮ್ಮ ಹೊಣೆಗಾರಿಕೆ ಅರಿತು ಅದಕ್ಕೆ ತಕ್ಕಂತೆ ಕರ್ತವ್ಯ ನಿರ್ವಹಿಸಬೇಕು. ದೇಶದಲ್ಲಿ ನಿರಂತರ ಬದಲಾವಣೆಗಳು ಆಗುತ್ತಲೇ ಇವೆ. ಇಂಥ ಬದಲಾವಣೆಗಳು ಸಕಾರಾತ್ಮಕವಾಗಿರಬೇಕು ಮತ್ತು ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿರಬೇಕು. ಪಠ್ಯ ಶಿಕ್ಷಕಣದ ಜೊತೆಗೆ ಬದುಕಿನ ಮೌಲ್ಯಗಳಿಗೂ ಸಹ ಹೆಚ್ಚು ಒತ್ತು ಕೊಡುವ ಅಗತ್ಯವಿದೆ ಎಂದರು.
ಶಾಸಕ ವಿಶ್ವಾಸ ವೈದ್ಯ ಮಾತನಾಡಿದರು.
ವೇದಿಕೆಯಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಈ ವೇಳೆ ಬಿಇಓ ಮೋಹನ ದಂಡಿನ್, ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ ಕುರಿ, ಇಓ ಆನಂದ ಬಡಕುಂದ್ರಿ, ಯರಗಟ್ಟಿ ತಹಶೀಲ್ದಾರ ಎಮ್.ಎನ್. ಮಠದ, ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚಣ್ಣವರ, ಮುಖ್ಯಾಧಿಕಾರಿ ಸಂಗನಬಸಯ್ಯ ಗದಿಗಿಮಠ, ಶಿವಪ್ರಕಾಶ್ ಪಾಟೀಲ, ಕದ್ರಾಪೂರಕರ, ಅನಿಲ ಮರಲಿಂಗನವರ, ಆನಂದ ಮೂಗಬಸವ, ಪುರಸಭೆ ಸದಸ್ಯ ಅರ್ಜುನ ಅಮೂಘಿ, ಹಾಗೂ ಶಿಕ್ಷಕರು ಇದ್ದರು.
