ಉಗರಗೋಳ: ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮದಲ್ಲಿ ಶನಿವಾರ ವಿಘ್ನ ನಿವಾರಕನನ್ನು ಗ್ರಾಮಸ್ಥರು ಸಡಗರದಿಂದ ಬರಮಾಡಿಕೊಂಡರು.
ಮುಂಜಾವಿನಿಂದಲೇ ಜನರು ಗಣಪನ ಮೂರ್ತಿಗಳನ್ನು ಹೊತ್ತು ತಂದು, ಸಾರ್ವಜನಿಕ ಮಂಟಪಗಳು ಹಾಗೂ ಮನೆಯಲ್ಲಿ ಪ್ರತಿಷ್ಠಾಪಿಸಿದರು. ಎಲ್ಲರಿಗೂ ಒಳಿತಾಗಲೆಂದು ಗಣೇಶನಲ್ಲಿ ಪೂಜಿಸಿದರು.
ಈ ಬಾರಿ ಉತ್ತಮ ಮಳೆ, ಬೆಳೆ ಹಿನ್ನೆಲೆಯಲ್ಲಿ ಜನರು ಸಂತಸದಲ್ಲಿದ್ದಾರೆ. ಹಾಗಾಗಿ ಸಂಭ್ರಮದಿಂದ ಚೌತಿ ಆರಂಭಿಸಿದರು. ವಿಘ್ನ ವಿನಾಶಕ ನಮ್ಮ ಬದುಕಿನಲ್ಲಿನ ಕಷ್ಟಗಳನ್ನು ನಿವಾರಿಸಲೆಂದು ಬೇಡಿಕೊಂಡರು.
ರಮೇಶ ಪಾಟೀಲ, ಮಲ್ಲನಗೌಡ ಪಾಟೀಲ, ರಾಜು ಪಾಟೀಲ, ಶಂಕ್ರಯ್ಯ ಸಂಬಯ್ಯನಮಠ, ಚಂದ್ರಶೇಖರ ಹಿರೇಮಠ, ಮುಗುಟಸಾಬ್ ಗುಡುನವರ, ಅಶೋಕ ರೂಗಿ, ಶೇಖರ ಪಾಟೀಲ, ರಾಯನಗೌಡ ಪಾಟೀಲ, ಅಡಿವೇಶ ಕಟಕೋಳ, ದೀಪಕ್ ಶಿಂದೆ ಇತರರಿದ್ದರು.
